Posted On: October 14th 2026, 05:38 am
ನವದೆಹಲಿಯ ಸುನಹರಿ ಬಾಗ್ನಲ್ಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಚಹಾ ಕೂಟದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು.
ಈ ವೇಳೆ ಕಳೆದ ಒಂದು ವಾರದಿಂದ ಶ್ರೀ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರು ನಡೆಸಿದ ಪ್ರತಿಭಟನೆಗಳು, ಪಾದಯಾತ್ರೆಗಳು ಹಾಗೂ ಮತದಾನದ ಹಕ್ಕು ಮತ್ತು ಚುನಾವಣಾ ಪಾರದರ್ಶಕತೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಯಿತು.
ಪ್ರತಿಯೊಬ್ಬ ಅರ್ಹ ಮತದಾರನ ಹಕ್ಕು ರಕ್ಷಿಸಲ್ಪಡುವವರೆಗೆ, ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಖಚಿತವಾಗುವವರೆಗೆ ಹಾಗೂ ಸಂವಿಧಾನದ ಮೌಲ್ಯಗಳು ಎತ್ತಿಹಿಡಿಯಲ್ಪಡುವವರೆಗೆ ನಮ್ಮ ಹೋರಾಟ ನಿಲ್ಲದು.
ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಮ್ಮ ಧ್ವನಿ, ಸಂಕಲ್ಪ ಮತ್ತು ಹೋರಾಟ ನಿರಂತರವಾಗಿ ಮುಂದುವರಿಯಲಿದೆ.
#RahulGandhi #INDIAAlliance #DefendDemocracy Load More